Posts

Showing posts with the label Life

Dreamy Facts

Image
  ಮೂಕಜ್ಜಿಯ ಕನಸಗಳು - ಡಾ. ಕೆ. ಶಿವರಾಮ ಕಾರಂತ  ಮೂಕಜ್ಜಿಯ ಕನಸುಗಳು ನನಗೆ ವಯಕ್ತಿಕವಾಗಿ ಮನಸಿಗೆ ಹತ್ತಿರವಾದ ಒಂದು ಪುಸ್ತಕ.  ಇದು  ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ ಏಕಾಯಿತು ಅಂತ ಪುಸ್ತಕ ಓದಿಮುಗಿಸುವಷ್ಟ್ರಲ್ಲಿ ಗೊತ್ತಾಗಿ ಹೋಯ್ತು.  ಅಜ್ಜಿ ಎಂದೊಡನೆ ಹಳೆಯ ಕಾಲದ ಕಟ್ಟುಪಾಡುಗಳನ್ನು ಸಾರುವವಳು ಎನ್ನುವ ಕಲ್ಪನೆ ಬರುವುದು ಸಹಜ . ಆದರೆ ಕಾರಂತರ ಮೂಕಜ್ಜಿಯ ತತ್ವ ಹಾಗೂ ನಂಬಿಕೆಗಳೇ ಬೇರೆ .   ಮೂಕಾಂಬಿಕೆ   ಎನ್ನುವ ಹೆಸರಿನಿಂದಾಗಿ ‘ ಮೂಕಿ ’   ಎಂದು ಕರೆಸಿಕೊಂಡರೂ , ಹೆಸರಿನಂತೆ ಮೂಕಿಯಾಗಿಯೆ ಕೆಲವು ವರ್ಷಗಳನ್ನು ಕಳೆದವಳು .   ಬಾಲ್ಯದಲ್ಲೇ ವಿಧವೆಯಾಗಿ ಒಂಟಿ ಜೀವನ ನಡೆಸುವ ಮೂಕಜ್ಜಿಗೊಂದು ದಿವ್ಯದೃಷ್ಟಿಯಿದೆ . ಒಬ್ಬ ವ್ಯಕ್ತಿಯನ್ನು ನೋಡಿ ಅವರ ಗುಣಚರಿತ್ರೆಗಳನ್ನು ಕಾಣುವ ಶಕ್ತಿ ಅಜ್ಜಿಗಿದೆ . ಕೆಲವೊಮ್ಮೆ ಯಾವುದೋ ಹಳೆಯ , ತಾನೆಂದೂ ನೋಡಿರದ ವಸ್ತುಗಳನ್ನು ಕೈಯಲ್ಲಿ ಹಿಡಿದಾಗ ಅಥವಾ ನೋಡಿರದ ಜಾಗಕ್ಕೆ ಹೋದಾಗ ಅವಳ ಕಣ್ಣೆದುರಿಗೆ ಆ ವಸ್ತುವಿಗೆ / ಸ್ಥಳಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಹಾದುಹೋಗುತ್ತವೆ . ಕಣ್ಣಿಗೆ ಕಂಡದನ್ನ ತನ್ನೊಳಗೆ ಗೊಣಗಿಕೊಳ್ಳುವ ಅಜ್ಜಿ , ಯಾರಿಗಾದರೂ ಏನಾದರೂ ಬುದ್ಧಿವಾದ ಹೇಳಬೇಕೆಂದರೆ ಯಾವ ದಾಕ್ಷಿಣ್ಯವನ್ನು ಎಣಿಸದೆ ಅನಿಸಿದನ್ನು ಹೇಳುವ ಸ್ವಭಾವದವಳು . ತನ್ನೊಂದಿಗೆ ತಾನೇ ಕಾಲಕಳೆಯಲು ಬಯಸುವ ಅಜ್ಜಿಗೆ ಸಾವಿರಾರು ದೇವರುಗಳಲ್ಲಿ ನಂಬಿಕೆಯಿ...

Definition of Success

Image
  ಯಶಸ್ವಿ -    ಸುಧಾ  ಮೂರ್ತಿ ನನಗೆ   ಸದಾ   ಸ್ಫೂರ್ತಿಯಾಗಿರುವ ಸುಧಾ ಮೂರ್ತಿ ಅವರ   ‘ ಯಶಸ್ವಿ'  ಕಾದಂಬರಿ ಕೈಗೆತ್ತಿಕೊಂಡಾಗ ಇದು ನನ್ನ ಮನಸ್ಸಿಗೆ ಇಷ್ಟೊಂದು ಹತ್ತಿರವಾಗುತ್ತದೆ ಎಂದು ಊಹಿಸಿರಲಿಲ್ಲ .  ಕಥೆಯಲ್ಲಿ   ಬರುವ ಕೆಲವು ಸನ್ನಿವೇಶಗಳು,   ಪಾತ್ರದಾರಿಗಳು ಅನುಭವಿಸುವ ತೊಳಲಾಟ ,  ಜೀವನದ ಏರಿಳಿತಗಳು ,  ಎಲ್ಲೋ ಒಂದು ಕಡೆ   ನಮ್ಮ ಬದುಕಿಗೂ   ಹೋಲಿಸಿ ನೋಡುವಂತೆ ಪ್ರೇರೇಪಿಸುತ್ತವೆ . ಬೆಂಗಳೂರಿನ   ಟಾಟಾ   ಇನ್ಸ್ಟಿಟ್ಯೂಟ್ನಲ್ಲಿ ಓದಿದ ಐವರು   ಸ್ನೇಹಿತರ   ಬದುಕು ಸಾಗುವ   ರೀತಿ,   ವಿದ್ಯಾಭ್ಯಾಸದ ನಂತರ ಅವರು   ಆರಿಸಿಕೊಳ್ಳುವ ದಾರಿ,   ಅ   ದಾರಿಯಲ್ಲಿ ಅವರು ಎದುರಿಸುವ ತೊಡಕುಗಳು,   ಬಂದ ತೊಡಕುಗಳನ್ನು ಮೆಟ್ಟಿ ಏರುವ   ಯಶಸ್ಸಿನ   ಮೆಟ್ಟಿಲುಗಳು.   ಹೀಗೆ ಕಥೆ    ಐವರು ಸ್ನೇಹಿತರ ಬದುಕಿನ ದಾರಿಯಲ್ಲಿ ಸಾಗುತ್ತದೆ .  ಯಾರ ದಾರಿಯೂ ಸುಗಮವಿಲ್ಲ.   ಮೊದಲಿಗೆ ನೇರವಾಗಿ ಕಂಡರೂ,   ಮುಂದೆ ನಡೆದಂತೆ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ.   ಯಾವ ದಾರಿ ಸರಿ ?  ಯಾರ ನಿರ್ಧಾರ ಸರಿ ?   ಯಾರ ಜೀವನ   ಸಂಪೂರ್ಣ   ತೃಪ್ತಿತಂದುಕೊಟ್ಟಿದೆ?   ಈ ಎಲ್ಲಾ ಪ್ರಶ್ನೆಗ...