Posts

Showing posts from October, 2022

Kaveri's Detective Story

Image
  THE BANGALORE DETECTIVES CLUB - Harini Nagendra The Bangalore Detectives Club caught my attention in a Melbourne library, and I was in awe. Evidently, I was eager to read a novel set in Bangalore and in a genre that I enjoy.  A nicely narrated murder mystery set against a 1920s backdrop. It is a vivid depiction of an Indian city before independence. Details about food habits, culture, city, transportation, racism based on caste, and gender inequality during those times are rendered beautifully. Kaveri the protagonist in the story, being a part of this conservative society is bold enough to fight for justice. Ramu being a loving and supportive husband adds strength to Kaveri’s detective journey. A tinge of light romance between Kaveri and Ramu elevates them as a perfect pair.  The references to Kaveri's interest in the investigative novels " Lady Molly of Scotland Yard " and " The Sign of the Four " by Arthur Conan Doyle(Creator of Sherlock Holmes) were partic...

Trek in search of Flying Lizard

Image
ಕರ್ವಾಲೊ -  ಕೆ. ಪಿ. ಪೂರ್ಣಚಂದ್ರ ತೇಜಸ್ವಿ    ಪುಸ್ತಕದ ಮುಕಪುಟ ನೋಡಿ ಕಥೆ ಭಯಾನಕವಾಗಿರಬಾಹುದು ಅಂತ ನೀರಿಕ್ಷಿಸಿದ್ದೆ. ಓದುತ್ತಾ ಹೋದಂತೆ ನಿಸರ್ಗದ ನೀಗೂಢತೆಯ ಪರಿಚಯವಾಗುತ್ತಾ ಹೋಯಿತು. ಓದುವಷ್ಟು ಹೊತ್ತು ಪರಿಸರದ ಮಧ್ಯ ಇದ್ದಂತ ಅನುಭವ.  ಸೃಷ್ಟಿ ಎಷ್ಟು ಸೌಮ್ಯವೋ ಅಷ್ಟೇ ನಿಗೂಢ, ರೌದ್ರ. ಅದರ ಆಳಕ್ಕೆ ಇಳಿದಷ್ಟೂ ಅದರ ವಿಸ್ಮಯ, ವೈಚಿತ್ರ್ಯ ಹೆಚ್ಚುತ್ತಾ ಹೋಗುತ್ತದೆ. ಸಾವಿರಾರು ಜೀವರಾಶಿಗಳು ಕಾಲಾಂತರದಲ್ಲಿ ವಿಕಸನಗೊಂಡು ಈ ಪರಿಸರಕ್ಕೆ ಹೊಂದಿಕೊಂಡು ಬದುಕುವ ದಾರಿ ಕಂಡುಕೊಂಡಿವೆ. ಕೆಲವು ಇನ್ನೂ ವಿಕಸನದ ಪ್ರಕ್ರಿಯೆಯಲ್ಲಿದ್ದರೆ, ಮತ್ತೆ ಹಲವು ಅಳಿವಿನಂಚಿನಲ್ಲಿವೆ.ಇಂಥದ್ದೇ ಒಂದು ಜೀವಿಯ ಹುಡುಕಾಟ, ಅನ್ವೇಷಣೆಯೇ ಕರ್ವಾಲೊ. ಮೂಡಗರೆ, ನಾರ್ವೆ ಸುತ್ತಮುತ್ತಲ ಕಾಡಿನಲ್ಲಿ ನಡೆವ ಈ ಪಯಣ ಓದುಗರಿಗೆ ಪರಿಸರದ ವಿಸ್ಮಯಗಳ ಪರಿಚಯ ಮಾಡಿಸುತ್ತದೆ. ತೇಜಸ್ವಿಯವರ ನೈಜ ನಿರೂಪಣೆಯಿಂದ ಕರ್ವಾಲೊ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ ಎಂದು ಭಾಸವಾಗುತ್ತದೆ. ಕಥೆಯ ಪಾತ್ರದಾರಿಗಳ ಮೂಲಕ ಹೊರಹೊಮ್ಮುವ ತಿಳಿ ಹಾಸ್ಯ, ಅವರಿಂದ ದೊರೆಯುವ ವೈಜ್ಞಾನಿಕ ಮಾಹಿತಿ, ತರ್ಕಬದ್ಧ ಸಂಭಾಷಣೆ ಓದುಗರನ್ನು ಹಿಡಿದಿಡುತ್ತದೆ.  ಮಂಗನಿಂದಾದ ಮಾನವ, ಮಾನವನಿಂದ ಬೆಳೆದ ತಂತ್ರಜ್ಞಾನ, ಅದನ್ನು ಬೆಳೆಸಿ ನಡೆಸಿದ ಸಂಶೋಧನೆ. ಹೀಗೆ ಮಾನವ ಎಷ್ಟೇ ಮುಂದುವರೆದಿದ್ದರೂ, ಗತಿಸಿಹೋದ ಕಾಲದ ತೆಕ್ಕೆಯೊಳಗೆ ಇನ್ನೂ ಅರಿಯಲಾಗದ ಅನೇಕ ರಹಸ್ಯಗಳು ಜ...

Dreamy Facts

Image
  ಮೂಕಜ್ಜಿಯ ಕನಸಗಳು - ಡಾ. ಕೆ. ಶಿವರಾಮ ಕಾರಂತ  ಮೂಕಜ್ಜಿಯ ಕನಸುಗಳು ನನಗೆ ವಯಕ್ತಿಕವಾಗಿ ಮನಸಿಗೆ ಹತ್ತಿರವಾದ ಒಂದು ಪುಸ್ತಕ.  ಇದು  ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ ಏಕಾಯಿತು ಅಂತ ಪುಸ್ತಕ ಓದಿಮುಗಿಸುವಷ್ಟ್ರಲ್ಲಿ ಗೊತ್ತಾಗಿ ಹೋಯ್ತು.  ಅಜ್ಜಿ ಎಂದೊಡನೆ ಹಳೆಯ ಕಾಲದ ಕಟ್ಟುಪಾಡುಗಳನ್ನು ಸಾರುವವಳು ಎನ್ನುವ ಕಲ್ಪನೆ ಬರುವುದು ಸಹಜ . ಆದರೆ ಕಾರಂತರ ಮೂಕಜ್ಜಿಯ ತತ್ವ ಹಾಗೂ ನಂಬಿಕೆಗಳೇ ಬೇರೆ .   ಮೂಕಾಂಬಿಕೆ   ಎನ್ನುವ ಹೆಸರಿನಿಂದಾಗಿ ‘ ಮೂಕಿ ’   ಎಂದು ಕರೆಸಿಕೊಂಡರೂ , ಹೆಸರಿನಂತೆ ಮೂಕಿಯಾಗಿಯೆ ಕೆಲವು ವರ್ಷಗಳನ್ನು ಕಳೆದವಳು .   ಬಾಲ್ಯದಲ್ಲೇ ವಿಧವೆಯಾಗಿ ಒಂಟಿ ಜೀವನ ನಡೆಸುವ ಮೂಕಜ್ಜಿಗೊಂದು ದಿವ್ಯದೃಷ್ಟಿಯಿದೆ . ಒಬ್ಬ ವ್ಯಕ್ತಿಯನ್ನು ನೋಡಿ ಅವರ ಗುಣಚರಿತ್ರೆಗಳನ್ನು ಕಾಣುವ ಶಕ್ತಿ ಅಜ್ಜಿಗಿದೆ . ಕೆಲವೊಮ್ಮೆ ಯಾವುದೋ ಹಳೆಯ , ತಾನೆಂದೂ ನೋಡಿರದ ವಸ್ತುಗಳನ್ನು ಕೈಯಲ್ಲಿ ಹಿಡಿದಾಗ ಅಥವಾ ನೋಡಿರದ ಜಾಗಕ್ಕೆ ಹೋದಾಗ ಅವಳ ಕಣ್ಣೆದುರಿಗೆ ಆ ವಸ್ತುವಿಗೆ / ಸ್ಥಳಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಹಾದುಹೋಗುತ್ತವೆ . ಕಣ್ಣಿಗೆ ಕಂಡದನ್ನ ತನ್ನೊಳಗೆ ಗೊಣಗಿಕೊಳ್ಳುವ ಅಜ್ಜಿ , ಯಾರಿಗಾದರೂ ಏನಾದರೂ ಬುದ್ಧಿವಾದ ಹೇಳಬೇಕೆಂದರೆ ಯಾವ ದಾಕ್ಷಿಣ್ಯವನ್ನು ಎಣಿಸದೆ ಅನಿಸಿದನ್ನು ಹೇಳುವ ಸ್ವಭಾವದವಳು . ತನ್ನೊಂದಿಗೆ ತಾನೇ ಕಾಲಕಳೆಯಲು ಬಯಸುವ ಅಜ್ಜಿಗೆ ಸಾವಿರಾರು ದೇವರುಗಳಲ್ಲಿ ನಂಬಿಕೆಯಿ...

True Talent

Image
  ನನ್ನ ತಮ್ಮ ಶಂಕರ - ಅನಂತ್ ನಾಗ್  ಶಂಕರನಾಗ್ ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಗು ಪ್ರತಿಭಾವಂತ ನಟ. ಪ್ರತಿ ಆಟೋ ಚಾಲಕರು ಆರಾಧಿಸಿ ಪ್ರೀತಿಸುವ ಕಲಾವಿದ. ಚಿತ್ರರಂಗ, ರಂಗಭೂಮಿ, ಸಾಮಾಜಿಕ, ರಾಜಕೀಯ, ವಾಣಿಜ್ಯ  ಹೀಗೆ ಹಲವಾರು ಕ್ಷೇತ್ರಗಳಲ್ಲಿ ಶಂಕರ್ ನಾಗ್ ಅವರಿಗಿರುವ ಆಸಕ್ತಿ, ಹೊಸ ಹೊಸ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವ ಅವರ ಛಲ, ಹಿಡಿದ ಕೆಲಸವನ್ನು ಸಾಕಾರಗೊಳಿಸುವಲ್ಲಿ ಅವರಿಗಿರುವ ಶ್ರದ್ಧೆ, ಕಷ್ಟಗಳನ್ನು ಕಂಡು ಕುಗ್ಗದೆ ಹಠದಿಂದ ಮುನ್ನುಗ್ಗುವ ಅವರ ಸ್ವಭಾವ ಎಲ್ಲವೂ ಅಣ್ಣ ಅನಂತ್ ನಾಗ್ ಅವರು ಕಂಡಂತೆ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಅಣ್ಣ ತಮ್ಮ ಒಟ್ಟಿಗೆ ಕಳೆದ ಬಾಲ್ಯ, ತಂದೆ ತಾಯಿಯೊಂದಿಗೆ ಅವರಿಗಿದ್ದ ಬಾಂಧವ್ಯ, ಅಕ್ಕನ ಜೊತೆಗಿದ್ದ ಅಕ್ಕರೆ ಎಲ್ಲವೂ ಓದುಗರ ಕಣ್ಮುಂದೆ ಸುಳಿದೋಗುತ್ತವೆ. ತಮ್ಮನಾಗಿದ್ದರೂ ಎಷ್ಟೋ ಬಾರಿ ಅನಂತ್ ನಾಗ್ ಅವರಿಗೆ ಶಂಕರ್ ನಾಗ್ ಅಣ್ಣನ ಸ್ಥಾನದಲ್ಲಿ ಬೆನ್ನೆಲುಬಾಗಿ ನಿಂತಿರುವ ನಿದರ್ಶನಗಳಿವೆ. ಚಿತ್ರರಂಗದಲ್ಲಿ ಶಂಕರ್ ನಾಗ್ ಅವರು ಕಂಡ ಸೋಲು-ಗೆಲುವು, ಕಷ್ಟ-ನಷ್ಟ, ಕೀರ್ತಿ-ಪ್ರಶಸ್ತಿ, ಅವಮಾನ-ಸನ್ಮಾನ ಎಲ್ಲದರ ಬಗೆಗಿನ ನೆನಪಿನ ಬುತ್ತಿಯನ್ನು ಅನಂತ್ ನಾಗ್ ಬಿಚ್ಚಿಡುತ್ತಾರೆ. ಆಗಿನ ಕಾಲಕ್ಕೆ ಶಂಕರ್ ನಾಗ್ ಅವರಿಗಿದ್ದ ದೂರದೃಷ್ಟಿ, ತಂತ್ರಜ್ಞಾನವನ್ನು ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಯೋಚನೆ, ವಾತಾವರಣ ತಮಗೆ ಪೂರಕವಾಗಿರದಿದ್ದರೂ ತಮ್ಮ ಕನಸುಗಳ್ನು ನನಸಾಗಿಸುವ ಹಂಬಲ,...

Definition of Success

Image
  ಯಶಸ್ವಿ -    ಸುಧಾ  ಮೂರ್ತಿ ನನಗೆ   ಸದಾ   ಸ್ಫೂರ್ತಿಯಾಗಿರುವ ಸುಧಾ ಮೂರ್ತಿ ಅವರ   ‘ ಯಶಸ್ವಿ'  ಕಾದಂಬರಿ ಕೈಗೆತ್ತಿಕೊಂಡಾಗ ಇದು ನನ್ನ ಮನಸ್ಸಿಗೆ ಇಷ್ಟೊಂದು ಹತ್ತಿರವಾಗುತ್ತದೆ ಎಂದು ಊಹಿಸಿರಲಿಲ್ಲ .  ಕಥೆಯಲ್ಲಿ   ಬರುವ ಕೆಲವು ಸನ್ನಿವೇಶಗಳು,   ಪಾತ್ರದಾರಿಗಳು ಅನುಭವಿಸುವ ತೊಳಲಾಟ ,  ಜೀವನದ ಏರಿಳಿತಗಳು ,  ಎಲ್ಲೋ ಒಂದು ಕಡೆ   ನಮ್ಮ ಬದುಕಿಗೂ   ಹೋಲಿಸಿ ನೋಡುವಂತೆ ಪ್ರೇರೇಪಿಸುತ್ತವೆ . ಬೆಂಗಳೂರಿನ   ಟಾಟಾ   ಇನ್ಸ್ಟಿಟ್ಯೂಟ್ನಲ್ಲಿ ಓದಿದ ಐವರು   ಸ್ನೇಹಿತರ   ಬದುಕು ಸಾಗುವ   ರೀತಿ,   ವಿದ್ಯಾಭ್ಯಾಸದ ನಂತರ ಅವರು   ಆರಿಸಿಕೊಳ್ಳುವ ದಾರಿ,   ಅ   ದಾರಿಯಲ್ಲಿ ಅವರು ಎದುರಿಸುವ ತೊಡಕುಗಳು,   ಬಂದ ತೊಡಕುಗಳನ್ನು ಮೆಟ್ಟಿ ಏರುವ   ಯಶಸ್ಸಿನ   ಮೆಟ್ಟಿಲುಗಳು.   ಹೀಗೆ ಕಥೆ    ಐವರು ಸ್ನೇಹಿತರ ಬದುಕಿನ ದಾರಿಯಲ್ಲಿ ಸಾಗುತ್ತದೆ .  ಯಾರ ದಾರಿಯೂ ಸುಗಮವಿಲ್ಲ.   ಮೊದಲಿಗೆ ನೇರವಾಗಿ ಕಂಡರೂ,   ಮುಂದೆ ನಡೆದಂತೆ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ.   ಯಾವ ದಾರಿ ಸರಿ ?  ಯಾರ ನಿರ್ಧಾರ ಸರಿ ?   ಯಾರ ಜೀವನ   ಸಂಪೂರ್ಣ   ತೃಪ್ತಿತಂದುಕೊಟ್ಟಿದೆ?   ಈ ಎಲ್ಲಾ ಪ್ರಶ್ನೆಗ...

It's a Deal !

Image
 THE DEAL OF A LIFETIME   A Short Story b y Fredrik Backman I just chose the book because it was less than 100 pages. I wanted to gain the momentum of reading and the satisfaction of finishing it. The Deal of a lifetime, a catchy curious caption. Though fictional, it provoked a hidden thought in my mind. It is a short story. I feel it is not even a complete story. It is rather a situation that makes you think about the purpose of life. What defines your happiness? Is it a success? Well, then, what is success? Is it making money? Name and fame? Leading healthy life? Or being happy in life? Everything is interconnected, if we need one we might have to lose the other. Ultimately, it is our choice.  A successful businessman, a father who valued his career, and development more than his family, is now alone in the hospital. Regretting not being a good father and kind human being. Given a chance to make the deal of a lifetime - his existence in exchange for the life of an ...